ಫೋರ್ಡ್, ಫೋರ್ಡ್‍ಮೆಡಕ್ಸ್
 	1873-1939. ಇಂಗ್ಲಿಷ್ ಕಾದಂಬರಿಕಾರ. ತಂದೆ ಜರ್ಮನ್ ಫ್ರಾನ್ಸಿಸ್ ಹ್ಯೂಫರ್. ಕೆಲಕಾಲ ಟೈಮ್ಸಾ ಪತ್ರಿಕೆಯ ಸಂಗೀತ ವಿಮರ್ಶಕನಾಗಿದ್ದ. ತಾತ ಕಲಾವಿದ ಫೋಡ್‍ಕ್ ಮೆಡ್ರ್ಸಾ ಬ್ರೌನ್. ಚಿಕ್ಕಪ್ಪ ವಿಲಿಯಮ್ ರಾಸೆಟಿ. ಹುಟ್ಟಿದ್ದು ಸರೆಯ ಮರ್ಟನಿನಲ್ಲಿ. ದಿ ಇನ್‍ಹೆರಿಟರ್ಸ್ (1901) ಮತ್ತು ರೊಮಾನ್ಸ್ (1903) ಕಾದಂಬರಿಗಳನ್ನು ಬರೆಯಲು ಜೋಸೆಫ್ ಕಾನ್ರಾಡನಿಗೆ ಸಹಾಯ ಮಾಡಿದ. 1908ರಲ್ಲಿ ಇಂಗ್ಲಿಷ್ ರಿವ್ಯೂ ಎಂಬ ಪತ್ರಿಕೆಯನ್ನಾರಂಭಿಸಿದ. 1909ರಲ್ಲಿ ಹೆಂಡತಿಯನ್ನು ಬಿಟ್ಟ. ಆಕೆಗೆ ಜೀವನಾಂಶ ಕೊಡದುದರಿಂದ ಹತ್ತು ದಿನ ಸೆರೆಮನೆಯಲ್ಲಿರಬೇಕಾಯಿತು. ಮೊದಲ ಮಹಾಯುದ್ದದಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ. 

	ದಿ ಫಿಫ್ತ್ ಕ್ವೀನ್ (1906), ದಿ ಹಾಫ್ ಮೂನ್ (1909), ದಿ ಗುಡ್ ಸೋಲ್ಜರ್ (1915), ಸಮ್ ಡು ನಾಟ್ (1924), ನೋ ಮೋರ್ ಪೆರೇಡ್ಸ್ (1925), ಎ ಮ್ಯಾನ್ ಕುಡ್ ಸ್ಟಾಂಡ್ ಆಫ್ (1926), ದಿ ಲಾಸ್ಟ್ ಪೋಸ್ಟ್ (1928), ದಸ್ ಟು ರೀವಿಸಿಟ್ (1921), ಇಟ್ ವಾಸ್ ದಿ ನೈಟಿಂಗೇಲ್ (1933), ಮೆಮೋರಿಸ್ ಅಂಡ್ ಕ್ರಿಟಿಸಿಸಮ್ಸ್ (1938)-ಇದು ಆತ್ಮಕತೆ. 

	1924ರಲ್ಲಿ ಪ್ಯಾರಿಸ್ಸಿನಲ್ಲಿ ಟ್ರಾನ್ಸ್ ಅಟ್ಲಾಂಟಿಕ್ ರೆವ್ಯೂ ಎಂಬ ಪತ್ರಿಕೆಯ ಸಂಪಾದಕನಾಗಿದ್ದ. ತನ್ನ ಕಡೆಯ ವರ್ಷಗಳನ್ನು ಈತ ಮಿಚಿಗನ್ನಿನಲ್ಲಿ ಕಳೆದ.
(ಎಚ್.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ